ಭೂಮಿಯಂತಹ ಇನ‍್ನೂಂದು ಗ‍್ರಹವನ‍್ನು ಹುಡುಕುವುದು ಮನುಷ‍್ಯನಿಗೆ ಇವತ‍್ತು ಅಗತ‍್ಯವಾಗಿದೆ.ಅದಕ‍್ಕಗಿ ನಾಸಾ,೨೦೦೯ರಲ‍್ಲಿ ಮಾರ್ಚ್ ೭ ರಂದು, ಕೆಪ‍್ಲರ್ ದೂರದರ್ಶಕವನ‍್ನು ಬಾಹ‍್ಯಾಕಾಶಕ‍್ಕೆ ಕಳುಹಿಸಿತು. ಕೆಪ್ಲರ್ ದೂರದರ್ಶಕ ಅಲವು ಉಪಕರಣಗಳನ್ನು ಹೊಂದಿದೆ. ಅದರಲ್ಲಿ 'ಫೊಟೋಮೀಟರ್' ಮುಖ್ಯ ಉಪಕರಣವಾಗಿದೆ.ಈ ಉಪಕರಣ 'ಕ್ಷೀರಪಥ'ದ ಒಂದು ಭಾಗದಲ‍್ಲಿರುವ ೧೦೦,೦೦೦ಕ‍್ಕು ಹೆಚ‍್ಚು ನಕ‍್ಷತ‍್ರಗಳ ಬೆಳಕನ‍್ನು ಮೂರಕ‍್ಕಿಂತ ಹೆಚ‍್ಚು ವರ್ಷಗಳ ಕಾಲ ವಿಶ‍್ಲೇಷಿಸಲಿದೆ. ಕೆಪ್ಲರ್ ದೂರದರ್ಶಕದ ಒಟ‍್ಟು ತೂಕ ೧೦೫೨.೪ ಕಿಲೋ. ಅದರಲ‍್ಲಿರುವ ಉಪಕರಣಗಳ ಒಟ‍್ಟು ತೂಕ ೪೭೮ ಕಿಲೋ. ದೂರದರ್ಶಕದ ವ‍್ಯಾಸ ೨.೭ ಮೀಟರ್, ಮತ‍್ತು ೪.೭ ಮೀಟರ್ ಎತ‍್ತರ. ಕೆಪ್ಲರ್ ದೂರದರ್ಶಕದ ಒಟ‍್ಟು ಖರ್ಚು $೬೦೦ ಮಿಲಿಯ. ೨೦೧೫ರ ಜನವರಿ ೬ರಂದು, ಕೆಪ‍್ಲರ್ ದೂರದರ್ಶಕದ ಕಂಡುಹಿಡಿದ ೧೦೦೦ನೇ ಗ‍್ರಹದ ಬಗ‍್ಗೆ ಮಾಹಿತಿ ಪ‍್ರಕಟಿಸಿತು.